ಬಿ.ಟಿ.ಎಮ್.ಬಡಾವಣೆ ದಕ್ಷಿಣ ಬೆಂಗಳೂರಿನ ಒಂದು ಪ್ರದೇಶವಾಗಿದೆ. ... ಎನ್ನುವುದು ಭೈರಸಂದ್ರ, ತಾವರೆಕೆರೆ, ಮಡಿವಾಳ ಎಂಬ ಪ್ರದೇಶಗಳ ಸಂಕ್ಷಿಪ್ತ ರೂಪ. ಈ ಬಡಾವಣೆಯ ಹೆಸರನ್ನು ಬದಲಿಸಿ ಕುವೆಂಪು ನಗರವೆಂದು ಮರುನಾಮಕರಣ ಮಾಡಲ್ಪಟ್ಟಿದ್ದರೂ 'ಬಿಟಿಎಂ ಲೇಔಟ್' ಎಂಬ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ. ಬೆಂಗಳೂರಿನ 'ರಿಂಗ್ ರೋಡ್' ಎಂದು ಕರೆಯಲ್ಪಡುವ ಪ್ರಮುಖ ರಸ್ತೆ ಈ ಬಡಾವಣೆಯ ಮೂಲಕ ಹಾದುಹೋಗುತ್ತದೆ. 'ಬಿ.ಟಿ.ಎಮ್. ಲೇಔಟ್ ಮೊದಲ ಹಂತ ಮತ್ತು ಎರಡನೇ ಹಂತವನ್ನು ಈ 'ರಿಂಗ್ ರೋಡ್' ಬೇರ್ಪಡಿಸುತ್ತದೆ. ಇದು ಮಹದೇಶ್ವರ ನಗರ, ಎನ್.ಎಸ್.ಪಾಳ್ಯ, ಬ್ಯಾಂಕ್ ಕಾಲೋನಿಗಳು ಮುಂತಾದ ಉಪಪ್ರದೇಶಗಳನ್ನು ಒಳಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೇಯಿಂಗ್ ಗೆಸ್ಟ್ ವಸತಿ ಗೃಹಗಳು ಈ ಬಡಾವಣೆಯಲ್ಲಿವೆ. ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ಈ ಬಡಾವಣೆಗೆ ತಾಗಿಕೊಂಡಿದ್ದು ದೇಶೀ ಮತ್ತು ವಿದೇಶಿ ಪಕ್ಷಿಗಳ ನೆಲೆವೀಡಾಗಿದೆ. ಈ ಬಡಾವಣೆ ಮಡಿವಾಳ, ಕೋರಮಂಗಲ, ಎಚ್.ಎಸ್.ಆರ್.ಲೇಔಟ್, ಬನ್ನೇರುಘಟ್ಟ ರಸ್ತೆ. ಜೆ.ಪಿ.ನಗರ ಮತ್ತು ಜಯನಗರ ಪ್ರದೇಶಗಳಿಗೆ ಹತ್ತಿರದಲ್ಲಿದ್ದು ವಾಣಿಜ್ಯ ಸಂಸ್ಥೆಗಳು ಮತ್ತು ವಸತಿ ಗೃಹಗಳ ಸೌಕರ್ಯಕ್ಕೆ ಅನುಕೂಲಕರವಾದ ಪರಿಸರದಲ್ಲಿದೆ. === ದೂರ ಮಾಹಿತಿ === ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ೪೫ ಕಿ.ಮೀ.ದೂರದಲ್ಲಿದೆ. 'ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ'ಮತ್ತು 'ಕೆಂಪೇಗೌಡ ಬಸ್ ನಿಲ್ದಾಣ'ದಿಂದ ಸುಮಾರು ೧೧ ಕಿ.ಮೀ ದೂರದಲ್ಲಿದೆ. 'ಬಿಟಿಎಂ ಲೇಔಟ್'ನಿಂದ ಸುಮಾರು ೧೦ ಮೀ. ಕಿ.ಮೀ. ದೂರದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಭಯಾರಣ್ಯವಿದೆ. === ಶಿಕ್ಷಣ ಸಂಸ್ಥೆಗಳು === === ಆಸ್ಪತ್ರೆಗಳು === ಜಯದೇವ ಇನ್ಸ್ಟಿ ಟ್ಯೂಟ್ ಆಫ್ ಕಾರ್ಡಿಯಾಲೊಜಿ ಸತ್ಯದೀಪ್ ಡೆಂಟಲ್ ಕ್ಲಿನಿಕ್, ಸಾಗರ್ ಅಪ್ಪೋಲೊ ಹಾಸ್ಪಿಟಲ್, ಬನ್ನೇರ್ಘಟ್ಟ ರೋಡ್, ಫಾರ್ಟೀಸ್ ( ಮೊದಲು ವೊಕಾರ್ಡ್ ಆಗಿತ್ತು)ಹಾಸ್ಪಿಟಲ್ ಬನ್ನೇರ್ಘಟ್ಟ ರೋಡ್, ಗಂಗೋತ್ರಿ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್, ಸ್ಪರ್ಷ್ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್, ರೆಡ್ಡಿ ಆರ್ಥೋಪೆಡಿಕ್ ಅಂಡ್ ಜನರಲ್ ನರ್ಸಿಂಗ್ ಹೋಂ ಶ್ರೀ ಸಾಯಿರಾಮ ಹಾಸ್ಪಿಟಲ್, ಸ್ಪೂರ್ಥಿ ಹಾಸ್ಪಿಟಲ್, ಅಪ್ಪೊಲೋ ಹಾಸ್ಪಿಟಲ್, ಕಾರಂತ್ ಸ್ಪೆಷ್ಯಾಲಿಟಿ ಹಾಸ್ಪಿಟಾಲ್ ಲೈಫ್ ಕೇರ್ ಹಾಸ್ಪಿಟಲ್ (ಗಂಗೋತ್ರಿ ಸರ್ಕಲ್) ಸೇಂಟ್ ಜಾನ್ ಹಾಸ್ಪಿಟಲ್ === ತಿನಿಸುತಾಣಗಳು === == ಉಲ್ಲೇಖಗಳು ==